Mail Sign in New User
Sign Up
Guruji Search Web Thatskannada
0
  ಸುದ್ದಿಜಾಲ    ಎನ್‌ಆರ್‌ಐ    ಅಂಕಣ    ಚಲನಚಿತ್ರ    ಕನ್ನಡ ಹಾಡು    ಅಡುಗೆ    ಪ್ರವಾಸ    ವಿಡಿಯೋ    ಚೌಚೌ    ಗ್ಯಾಲರಿ    Font Help  
ಲೇಖನ-ಸಂದರ್ಶನ ನಮ್ಮ ಕರ್ನಾಟಕ ಗಾನ ಕೋಗಿಲೆ ಕವನ ಸಿಂಚನ ಸಣ್ಣ ಕಥೆ ಪುಸ್ತಕ ಪ್ರೀತಿ
ಮುಖಪುಟ  -->ಸಾಹಿತ್ಯ ಸೊಗಡು  -->ಎನ್‌ಆರ್‌ಐ ಕನ್ನಡ ಕಲರವ -->ಸಮಾಚಾರ
ಜೂನ್‌ 02, 2003

ಭೂಮಿಕಾದಲ್ಲಿ ‘ತಿಂಮ’ ಬೀಚಿ ಕಚಗುಳಿ
ಬೀಚಿಯವರನ್ನು ಹತ್ತಿರದಿಂದ ಬಲ್ಲ ಸುರೇಶ್‌ ರಾಮಚಂದ್ರ ಜೂ.8ರಂದು ಕಚಗುಳಿ ಇಡುವರು.

* ದಟ್ಸ್‌ಕನ್ನಡ ಬ್ಯೂರೋ

Beechi‘ಕರ್ನಾಟಕದ ಜಾರ್ಜ್‌ ಬರ್ನಾರ್ಡ್‌ ಷಾ’ ಅಂತಲೇ ಹೆಸರಾಗಿದ್ದ ಬೀಚಿ ಜೋಕುಗಳ ಧಾರೆ ಜೋಕ್‌ಫಾಲ್ಸಿನಷ್ಟು ಜೋರು. ಕಚಗುಳಿ ಇಡುತ್ತಲೇ ವ್ಯಂಗ್ಯೋಕ್ತಿಯನ್ನು ಜನಜನಿತವಾಗಿಸಿದ ಅವರ ಬರಹಗಳನ್ನು ಪದೇಪದೇ ಓದಿ ಇವತ್ತಿಗೂ ಹೊಟ್ಟೆ ಹುಣ್ಣಾಗುವಂತೆ ನಗುವ ಅಭಿಮಾನಿಗಳ ದೊಡ್ಡ ಬಳಗವಿದೆ.

Suresh Ramachandranಇಂತಿದ್ದ ಬೀಚಿ ಅವರ ಬರಹಗಳನ್ನು ಮೆಲುಕು ಹಾಕಲು, ಅವರನ್ನು ನೆನಪಿಸಿಕೊಳ್ಳಲು ‘ಭೂಮಿಕಾ’ ಈ ಬಾರಿ ಸುರೇಶ್‌ ರಾಮಚಂದ್ರ ಅವರನ್ನು ಮಾತಾಡಿಸುತ್ತಿದೆ. ‘ಕನ್ನಡ ಹಾಸ್ಯ ಬ್ರಹ್ಮ ಬೀಚಿ ಅವರ ಬರಹಗಳು ಮತ್ತು ನೆನಪುಗಳು’ ಅನ್ನೋದು ಕಾರ್ಯಕ್ರಮದ ಶೀರ್ಷಿಕೆ. ಜೂನ್‌ 8ನೇ ತಾರೀಕು ಭಾನುವಾರ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ
Bauer Community Center ನಲ್ಲಿ ಮಾಹೆ ಮಂಥನ. ‘ತಿಮ್ಮ’ನ ನೆನಕೆಯಲ್ಲಿ ಗೊಳ್ಳನೆ ನಗುವ ಮುಫತ್ತು ಅವಕಾಶ.

ಬೀಚಿ ಬಗ್ಗೆ ನಿಮಗಿಷ್ಟು ಗೊತ್ತಿರಲಿ

ಬೀಚಿ ನಿಜನಾಮ ರಾಯಸಂ ಭೀಮಸೇನರಾಯ. ಹುಟ್ಟಿದ್ದು 1913 ರಲ್ಲಿ, ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ಓದಿದ್ದು ಕೇವಲ ಎಸ್ಸೆಸ್ಸೆಲ್ಸಿವರೆಗೆ ಮಾತ್ರ. ಸರ್ಕಾರಿ ಕಚೇರಿಯಾಂದರಲ್ಲಿ ಅಟೆಂಡರ್‌ ಕೆಲಸದಿಂದ ಶುರುವಾದ ವೃತ್ತಿ ಜೀವನ ಸಿ.ಐ.ಡಿ. ವಿಶೇಷ ಘಟಕದ ಸೂಪರಿಂಟೆಂಡೆಂಟ್‌ ಹುದ್ದೆವರೆಗೆ ಸಾಗಿತು.

ಸಾಹಿತ್ಯದ ಗಂಧ- ಗಾಳಿಯೇ ಇರದಿದ್ದ ಬೀಚಿಗೆ ಅ.ನ.ಕೃ. ಅವರ ‘ಸಂಧ್ಯಾರಾಗ’ ಓದಿದ ಮೇಲೆ ಬರೆಯುವ ಆಸೆ ಹುಟ್ಟಿತಂತೆ. ಆಮೇಲೆ ಕೆಲವು ಪತ್ರಿಕೆಗಳಲ್ಲಿ ತಿಂಮನ ಹರಟೆ ಶುರುವಿಟ್ಟುಕೊಂಡು, ಕಚಗುಳಿಯಿಟ್ಟರು. ಕನ್ನಡದ ಮೊಟ್ಟ ಮೊದಲ ಹಾಸ್ಯ ಕಾದಂಬರಿ ‘ದಾಸಕೂಟ’ವನ್ನು ಬರೆದ ಬೀಚಿಯವರ ನಗೆ ಬರೆಹಗಳವೇ 60 ಕೃತಿಗಳು ಪ್ರಕಟವಾಗಿವೆ. ಸತೀಸೂಳೆ, ಸರಸ್ವತಿಸಂಹಾರ, ಖಾದಿಸೀರೆ, ಬೆಂಗಳೂರು ಬಸ್ಸು, ದೇವನ ಹೆಂಡ, ಏರದ ಬಳೆ, ಮೇಡಮ್ಮನ ಗಂಡ, ಟೆಂಟ್‌ ಸಿನಿಮಾ, ಆರಿದ ಚಹಾ, ಬಿತ್ತಿದ್ದೇ ಬೇವು- ಇವರ ಪ್ರಮುಖ ಕಾದಂಬರಿಗಳು.

ತಮ್ಮನ್ನು ತಾವೇ ತಿಂಮ ಎಂದು ಕರೆದುಕೊಂಡು ಇವರು ಬರೆದ ತಿಂಮನ ತಲೆ, ಅಂದನಾ ತಿಂಮ, ತಿಂಮಿಕ್ಷನರಿ, ಬೆಳ್ಳಿ ತಿಮ್ಮ 108 ಹೇಳಿದ, ಅಮ್ಮಾವ್ರ ಕಾಲ್ಗುಣ, ಚಿನ್ನದ ಕಸ, ಹುಚ್ಚು ಹುರುಳು, ಉತ್ತರ ಭೂತ- ಮೊದಲಾದ ನಗೆ ಹನಿಗಳ ಸಂಕಲನಗಳು ಮನೆಮಾತಾಗಿವೆ. ಅವರ ‘ಭಯಾಗ್ರಫಿ’ ಅವರಂತೆಯೇ ಸದಾ ನಗುತ್ತಿದೆ.

ಮಾತಿನ ಓಘದಲ್ಲಿ ವಿಚಾರ ನಿಧಾನ ಮುಟ್ಟಿಸುವ ಜಾಯಮಾನದ ಬೀಚಿ ಅ.ನ.ಕೃ. ಅವರನ್ನು ತಮ್ಮ ಗುರು ಎಂದೇ ಭಾವಿಸಿದ್ದರು. ರೇಡಿಯೋ ನಾ-ಟಕಗಳ ಮೂಲಕ ಪ್ರವರ್ಧಮಾನಕ್ಕೆ ಬಂದ ಬೀಚಿ ನಾಟಕಗಳು, ಹರಟೆಗಳು, ಕಾದಂಬರಿಗಳಲ್ಲಿನ ಜೋಕು ಜೋಕಾಲಿ ಆಡೋದೇ ಸೊಗಸು. ಇಂತಿದ್ದ ಬೀಚಿ 1980ರಲ್ಲಿ ನಿಧನರಾದರು.

ಬೀಚಿ ಅವರನ್ನು ಅರಿತಿರುವ ಸುರೇಶ್‌ ರಾಮಚಂದ್ರ
ಭೂಮಿಕಾ ತಿಂಗಳಂಗಳದಲ್ಲಿ ‘ತಿಂಮನ ತಲೆ’ಯನ್ನು ಪದೇಪದೇ ಕೆರೆಯುವ ಚೆಂದದ ಕೆಲಸಕ್ಕೆ ಒಪ್ಪಿಕೊಂಡಿರುವ ಸುರೇಶ್‌ ರಾಮಚಂದ್ರ ವೃತ್ತಿಯಲ್ಲಿ ಕಂಪ್ಯೂಟರ್‌ ವಿಜ್ಞಾನಿ. ಬೀಚಿ ಜತೆಯಲ್ಲಿ ಅನೇಕ ಗಳಿಗೆಗಳನ್ನು ಕಳೆದಿರುವ ಸುರೇಶ್‌ ನಾಲಗೆ ಮೇಲೆ ಬೀಚಿ ಜೋಕುಗಳು ಸಲೀಸಾಗಿ ಪುಟಿಯುತ್ತವೆ. ಜೋಕುಗಳ ಜತೆಜತೆಗೇ ಬೀಚಿ ಚಿಂತನೆಗಳನ್ನೂ ಸಭಿಕರಿಗೆ ಮುಟ್ಟಿಸುವ ಉಮೇದಿ ಸುರೇಶ್‌ ಅವರದ್ದು.

ಕಾರ್ಯಕ್ರಮಕ್ಕೆ 5 ನಿಮಿಷ ಮುನ್ನವೇ ಎಲ್ಲರೂ ಬಂದು ಸೇರಿದರೆ ಒಳ್ಳೆಯದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ-

Dr.Vijaya Kulakarni: 301-871-2234
Padmaja prabhakara: 301-977-3296
Indira Prativadi: 301-670-1665
Jaya Nagendra: 301-352-9256


ನೋಡಿ- www.bhoomikaa.org

ಬಾವರ್‌ ಕಮ್ಯುನಿಟಿ ಸೆಂಟರ್‌ಗೆ ಹೋಗುವ ಮಾರ್ಗ-
From Beltway to I-270N to Exit 6
From I-270 S to Exit # 6 which is Rt 28
(W. Montgomery Ave) towards Rockville.
This becomes Viers Mill Rd (Rte 586)
Make left at Norbeck Rd (Rt 28)
After 5 traffic lights, make right on to Bauer Drive. Community center is on your left.
Tel: 301-468-4015


Click here to go to top
ಮುಖಪುಟ / ಸಾಹಿತ್ಯ ಸೊಗಡು


ನಿಮ್ಮ ಅಮೂಲ್ಯ ಟೀಕೆ-ಟಿಪ್ಪಣಿ, ಸಲಹೆ-ಸೂಚನೆಗಳಿಗೆ ಸ್ವಾಗತ.
ನಮಗೆ ಬರೆದು ತಿಳಿಸಲು ಎರಡು ನಿಮಿಷ ಬಿಡುವು ಮಾಡಿಕೊಳ್ಳಿ
    ಇವತ್ತಿನ ಓದುವ ಸಾಮಗ್ರಿ
    
ಚಲನಚಿತ್ರ
 ಶಂಕರನಾಗ್ ಹೋಗಿ ಇಂದಿಗೆ ಹದಿನೇಳು ವರ್ಷ?
 ಹೆಸರು ಬದಲಾವಣೆ ಹುಡುಗಾಟವೋ ಹುಚ್ಚುತನವೋ?
 ಪಲ್ಭರ್ಕೆಲಿಯೆ ಕೋಯಿ ಹಮೆ ಪ್ಯಾರ ಕರಲೆ, ಝೂಟಾಹಿ ಸಹಿ!
 ಮಕಾಡೆ ಮಲಗಿದ ಸ್ವಮೇಕು, ಸೆಂಚುರಿ ಬಾರಿಸಿದ ರಿಮೇಕು
 ಅಗ್ರಹಾರ,ರೋಡ್ ರೋಮಿಯೋ, ಗುಣ ಇಂದೇ ನೋಡಿ
 ಕನ್ನಡ ಚಿತ್ರದಲ್ಲಿ ಪ್ರಥಮ ಬಾರಿಗೆ ನಟಿಸುತ್ತಿರುವ ಕೀರತ್
 ಭಾರತದ ಅಗ್ರಗಣ್ಯ ಸುರಸುಂದರಿ ನಿಖಿತಾ ಆನಂದ್
 ನೆನಪುಗಳ ಮೆರವಣಿಗೆಯಲ್ಲಿ ಉಳಿದದ್ದು ಬರೀ ಕಹಿ
 'ಬಲ್ಲಿ' ಹೆಸರಿನ ಸುತ್ತವೇ ಸುತ್ತಿಕೊಳ್ಳುತ್ತಿರುವ ವಿವಾದದ ಬಳ್ಳಿ
 ಎದೆಭಾರ ಕುಗ್ಗಿಸಲು ನಮಿತಾ ಮಲೇಷಿಯಾ ಯಾತ್ರೆ
ತಾಜಾ ಸುದ್ದಿಗಳು/ನುಡಿಚಿತ್ರಗಳು
 ದ್ರೌಪತಿ ಪಾತ್ರದಲ್ಲಿ ಕನಸಿನಕನ್ಯೆ ಹೇಮಾಮಾಲಿನಿ
 ಹೊಸ ನಾಟಕ : ಊದುಮಾರಿ ಗೌಡ್ರ ಜತೆ ಸಿನ್ಹಾ ಸಂಧಾನ
 ತುಳಸೀವನ:ದಾಸ ಸಾಹಿತ್ಯ ಮತ್ತು ಚಿತ್ರಗೀತೆಗಳು
 ಜೆಡಿಎಸ್ ಫಸ್ಟ್; ಕಾಂಗ್ರೆಸ್ ನೆಕ್ಸ್ಟ್; ಬಿಜೆಪಿ ಲಾಸ್ಟ್!!!
 ರಾಜ್ಯದೆಲ್ಲೆಡೆ ಮತ ಎಣಿಕೆ ಆರಂಭ;ಮೈಸೂರು 'ಕೈ'ವಶ
 ನಮ್ಮ ವಿಶ್ವನಾಥನ್ ಆನಂದ್ ಮತ್ತೆ ಚದುರಂಗ ಸಾಮ್ರಾಟ
 ನಾಡುನುಡಿಗಾಗಿ ಇದು ನನ್ನ ಅಂತಿಮ ಹೋರಾಟ : ದೇಜಗೌ
 ಹಿರಿಯ ಸಾಹಿತಿ ವೀ.ಚಿಕ್ಕವೀರಯ್ಯ ವಿಧಿವಶ
 ಬಿಕ್ಕಟ್ಟನ್ನು ಪರಿಹರಿಸಲು ರಾಜ್ಯಕ್ಕೆ ಆಗಮಿಸಿದ ಸಿನ್ಹ
 ರಾಮನ ಅಸ್ತಿತ್ವದ ನಿರಾಕರಣೆ ಕುರಿತು ವಿಚಾರ ಗೋಷ್ಠಿ
 ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ತುರ್ತುಪರಿಸ್ಥಿತಿ ನಿರ್ವಹಣಾ ಘಟಕ
 ಮೆಲ್ಲ ಮೆಲ್ಲನೆ ಬಂದು ಪಾಂಟಿಂಗ್ ಕೆನ್ನೆಗೆ ಪಪ್ಪಿ ಕೊಟ್ಟು
 ಮನನೊಂದು ಪ್ರಶಸ್ತಿಯನ್ನು ಸ್ವೀಕರಿಸುತ್ತಿಲ್ಲ: ಆಡ್ವಾಣಿ
 ವೇಶ್ಯಾವೃತ್ತಿಗೆ ಕಾನೂನು ಚೌಕಟ್ಟು :ಓದುಗರು ಏನಂತಾರೆ?
 ಪಾಸ್ ಪೋರ್ಟ್ ಗೋಲ್ ಮಾಲ್: ನಿಮಗಿದು ತಿಳಿದಿರಲಿ
  ವಾರ್ತೆಯ ಮುಖ್ಯಾಂಶಗಳು :ಮುನಿಸಿಪಾಲಿಟಿಗೆ ನಡೆದ..
 ಭಾರತದಲ್ಲಿ ಆಸ್ಟ್ರೇಲಿಯ :ಏಕದಿನ ಪಂದ್ಯ ಸರಣಿ ವೇಳಾಪಟ್ಟಿ
 ಆಪ್ತಮಿತ್ರರ ರಾಮೇಶ್ವರ ಪ್ರವಾಸದ ಕರುಣಾಜನಕ ವರದಿ
 ರು.99ಕ್ಕೆ ಏರ್ ಟೆಲ್ ವೈರ್ ಲೆಸ್ ಬ್ರಾಡ್ ಬ್ಯಾಂಡ್ ಸೇವೆ
ಚಿತ್ರಪಟ / ವಿಡಿಯೋ
Picture of the day : Keerath - acting in Kannada film Geleyaಪಿಕ್ಚರ್ ಆಫ್ ದಿ ಡೇ :
ಕನ್ನಡ ಚಿತ್ರದಲ್ಲಿ ಪ್ರಥಮ ಬಾರಿಗೆ
ನಟಿಸುತ್ತಿರುವ ಚೆಲುವೆ ಕೀರತ್


Nikhita Anand Who is this beauty? Welcome to India
ಸುಭಾಷಿತ : ಹಾಡೊಂದ ಕೇಳಿ
ಕನ್ನಡ ವೆಬ್ ಲಿಂಕ್ಸ್ : ಹಲೋ ಫ್ರೆಂಡ್ಸ್‌
Recommended Links
    Cricket     Laser Printer Labels     Thermal Paper Rolls, Printer Ribbons, Receipt Paper     India Phone rates - BSNL, Bharti, Reliance, Tata Indicom     Bollywood - Movies, Reviews, Previews     India Outsourcing information     Gallery, Wallpapers, Screensavers
    Free Local Classifieds        India travel     Online Shopping & Auctions      Visitor Medical Insurance