ನೀರು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ನೀರಿನ ಹನಿ

ನೀರು ಎಲ್ಲ ಜೀವಿಗಳಿಗೆ ಅಗತ್ಯವಾದ ರುಚಿ-ರಹಿತ ಮತ್ತು ವಾಸನಾ-ರಹಿತ ವಸ್ತು. ಇದು ಭೂಮಿಯ ಮೇಲ್ಮೈಯ ಶೇ. ೭೦ ಭಾಗಗಳಲ್ಲಿ ಕಂಡುಬರುತ್ತದೆ. ಪ್ರಪಂಚದಲ್ಲಿ ಒಟ್ಟು ೧೪೦ ಕೋಟಿ ಘನ ಕಿಮೀ ಗಳಷ್ಟು ನೀರು ವಿವಿಧ ರೂಪಗಳಲ್ಲಿ ಇದೆಯೆಂದು ಅಂದಾಜು ಮಾಡಲಾಗಿದೆ. ಇದರಲ್ಲಿ ಬಹಳಷ್ಟು ಭಾಗ ಸಮುದ್ರಗಳಲ್ಲಿ, ಧ್ರುವ ಪ್ರದೇಶಗಳಲ್ಲಿ ಘನ ರೂಪದಲ್ಲಿ, ಹಾಗೂ ಮೋಡ, ನೀರಾವಿ ಮೊದಲಾದ ರೂಪಗಳಲ್ಲಿದೆ.

ನೀರಿನ ರಾಸಾಯನಿಕ ಸೂತ್ರ H2O - ಎಂದರೆ ಒಂದು ಅಣು ನೀರಿನಲ್ಲಿ ಎರಡು ಜಲಜನಕ ಅಣುಗಳು ಹಾಗೂ ಒಂದು ಆಮ್ಲಜನಕದ ಅಣು ಇರುತ್ತವೆ. ಹೆಚ್ಚಿನ ಪ್ರಮಾಣದ ನೀರು ಒಟ್ಟಿಗೆ ಇರುವಾಗ ತಿಳಿನೀಲಿ ಬಣ್ಣ ಪಡೆಯುತ್ತದೆ. ಇದಕ್ಕೆ ಕಾರಣ ನೀರು ಕೆಂಪು ಬಣ್ಣದ ಬೆಳಕನ್ನು ಅಲ್ಪ ಪ್ರಮಾಣದಲ್ಲಿ ಹೀರಿಕೊಂಡು ನೀಲಿ ಬೆಳಕನ್ನು ಹೆಚ್ಚಾಗಿ ಚದುರಿಸುವುದೇ ಆಗಿದೆ.


ಹಿಮದ ಚೂರುಗಳು

ನೈಸರ್ಗಿಕವಾಗಿ, ನೀರು ಅನೇಕ ರೂಪಗಳಲ್ಲಿ ಕಂಡುಬರುತ್ತದೆ. ಸಾಗರದಲ್ಲಿ ನೀರು ಮತ್ತು ಮಂಜು ಗೆಡ್ಡೆಗಳ ರೂಪದಲ್ಲಿ, ಆಕಾಶದಲ್ಲಿ ನೀರಾವಿ ಮತ್ತು ಮೋಡಗಳ ರೂಪದಲ್ಲಿ, ಭೂಮಿಯ ಮೇಲೆ ನದಿಗಳು ಮತ್ತು ಮಂಜು-ಹಿಮಗಳ ರೂಪದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.

ಕರಗುವಿಕೆ, ಆವಿಯಾಗುವಿಕೆ, ಮಳೆ ಮತ್ತು ಹರಿಯುವಿಕೆಗಳ ಕಡೆಯಿಂದ ನೀರು ಒಂದು ರೂಪದಿಂದ ಇನ್ನೊಂದಕ್ಕೆ ರೂಪಾಂತರ ಪಡೆಯುತ್ತಾ ಇರುತ್ತದೆ.

ನದಿ ನೀರು[ಬದಲಾಯಿಸಿ]

ನದಿ ನೀರು ಕಲುಷಿತಗೊಳ್ಳುವುದು[ಬದಲಾಯಿಸಿ]

  • ಕಾರ್ಖಾನೆಗಳಿಂದ
  • ಉಷ್ಣಸ್ಥಾವರಗಳಿಂದ. [೧]
  • ಕೃಷಿ
  • ಗಣಿಗಾರಿಕೆ
  • ನಗರ ಪ್ರದೇಶಗಳಿಂದ


ಹೆಚ್ಚಿನ ಓದು[ಬದಲಾಯಿಸಿ]

ಈ ಲೇಖನವನ್ನು ಸಂಪಾದಿಸಬೇಕಾಗಿದೆ/ಅಭಿವೃದ್ದಿಪಡಿಸಬೇಕಾಗಿದೆ.

ಬಾಹ್ಯಕೊಂಡಿಗಳು / ಉಲ್ಲೇಖಗಳು[ಬದಲಾಯಿಸಿ]

  1. ಕೃಷಿ ಭೂಮಿ ಬೆಲೆ ತಿಳಿದಿಲ್ಲ , ಕನ್ನಡ ಪ್ರಭ, Tuesday July 12 2011 12:41 IST

maaaaaaaaaaaaaaaaaaaaaaaaaaaaaaaaadhar chood\

"http://kn.wikipedia.org/w/index.php?title=ನೀರು&oldid=404978" ಇಂದ ಪಡೆಯಲ್ಪಟ್ಟಿದೆ