ಕೊಲ್ಕತ್ತ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕೊಲ್ಕತ್ತ
কলকাতা
कोलकाता
ಕೊಲ್ಕತ್ತ  কলকাতাकोलकाता ನಗರದ ಪಕ್ಷಿನೋಟ
ವಿಕ್ಟೋರಿಯ ಮೆಮೊರಿಯಲ್
India-locator-map-blank.svg
Red pog.svg
ಕೊಲ್ಕತ್ತ
কলকাতা
कोलकाता
ರಾಜ್ಯ
 - ಜಿಲ್ಲೆ
ಪಶ್ಚಿಮ ಬಂಗಾಳ
 - ಕೊಲ್ಕತ್ತ
ನಿರ್ದೇಶಾಂಕಗಳು 22.5697° N 88.3697° E
ವಿಸ್ತಾರ
 - ಎತ್ತರ
1500 km²
 - 9 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ
 - Agglomeration (೨೦೦೧)
4,580,544
 - 9920/ಚದರ ಕಿ.ಮಿ.
 - 14,681,589
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 700 xxx
 - +91 (33)
 - 
ಅಂತರ್ಜಾಲ ತಾಣ: www.kolkatamycity.com
 The Kolkata urban agglomeration also includes portions of North 24 Parganas and South 24 Parganas districts.

ಕೊಲ್ಕತ್ತ ಪಶ್ಚಿಮ ಬಂಗಾಳ ರಾಜ್ಯದ ರಾಜಧಾನಿ. ೧೯೧೧ಕ್ಕೆ ಮೊದಲು ಬ್ರಿಟಿಷರ ಆಳ್ವಿಕೆಯಲ್ಲಿ ಬ್ರಿಟಿಷ್ ಭಾರತದ ರಾಜಧಾನಿಯೂ ಆಗಿತ್ತು. ಕೊಲ್ಕತ್ತದಲ್ಲಿ ನೋಡಲೇಬೇಕಾದ ಹಲವು ಸ್ಥಳಗಳಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಹೌರಾ ಸೇತುವೆ, ಹೌರಾ ರೈಲುನಿಲ್ದಾಣದಿಂದ ಹೊರಬಂದು ಅಲ್ಲಿಂದ ಕಣ್ಣು ಹಾಯಿಸಿದರೆ ಎಡಗಡೆ ಕಣ್ಣಳತೆಯ ದೂರದಲ್ಲೇ ಹೌರಾ ಸೇತುವೆ ಕಂಡುಬರುತ್ತದೆ. ವಿವೇಕಾನಂದರ ದೀಕ್ಷಾಸ್ಥಳ ಹಾಗೂ ನಿವಾಸವಿರುವ ಬೇಲೂರುಮಠ, ರಾಮಕೃಷ್ಣ ಪರಮಹಂಸರ ಕ್ಷೇತ್ರವಾದ ದಕ್ಷಿಣೇಶ್ವರ, ರವೀಂದ್ರಸೇತು ಎಂಬ ಕೇಬಲ್ ಸೇತುವೆ, ಅಮೆರಿಕಾದ ವೈಟ್ ಹೌಸ್ ಪ್ರತಿರೂಪವಾದ ವಿಕ್ಟೋರಿಯಾ ಹಾಲ್, ಈಜಿಪ್ಟ್ ಮಮ್ಮಿಯನ್ನು ಇಟ್ಟಿರುವ ಇಂಡಿಯಾ ಮ್ಯೂಸಿಯಂ, ಪುರಾತನ ಸಂತ ಪೌಲನ ಚರ್ಚ್, ಕೊಲ್ಕತ್ತ ಎಂಬ ಹೆಸರು ಬರಲು ಕಾರಣವಾದ ಕಾಳಿಘಾಟ್ ಬಳಿಯ ಕಾಳಿಗುಡಿ, ಪುಟ್ಟ ಪುಟ್ಟ ಕನ್ನಡಿಗಳಿಂದ ಕಟ್ಟಲಾದ ಜೈನಗುಡಿ, ಇಂಡಿಯಾದ ಪ್ರಪ್ರಥಮ ತ್ವರಿತಸಾರಿಗೆ ವ್ಯವಸ್ಥೆಯಾದ ಮೆಟ್ರೋ ಸುರಂಗರೈಲು, ರಸ್ತೆ ಮೇಲಿನ ರೈಲು ಹಳಿಯ ಟ್ರ್ಯಾಮ್‌ಕಾರ್, ಕೂಲಿಗಳು ಎಳೆದುಕೊಂಡು ಓಡುತ್ತಾ ಸಾಗುವ ಕೈ ರಿಕ್ಷಾ, ಧರ್ಮತಲ (ಈಗಿನ ಎಸ್ಪ್ಲಾನೆಡ್ ), ಸೈನ್ಸ್ ಮ್ಯೂಸಿಯಂ, ಮೃಗಾಲಯ ಇತ್ಯಾದಿಗಳು. ಇವನ್ನೆಲ್ಲ ನೋಡಲು ಎರಡು ಮೂರು ದಿನಗಳಾದರೂ ಬೇಕು.

ನಮ್ಮಲಿನ ದಸರೆಯನ್ನು ಇಲ್ಲಿ ದುರ್ಗಾ ಪೂಜೆ ಎಂದು ವೈಭದಿದಂದ ಆಚರಿಸುತ್ತಾರೆ . ಈ ವೇಳೆಯಲ್ಲಂತೂ ಕೊಲ್ಕತ್ತ ನೋಡಲು ತುಂಬಾ ಚೆನ್ನಾಗಿರುತ್ತದೆ. ಆ ದಿನಗಳಲ್ಲಿ ಈ ನಗರವು ಮಲಗುವುದೇ ಇಲ್ಲ. ನಗರದ ತುಂಬಾ ಜನವೋ ಜನ. ಎಲ್ಲಿ ನೋಡಿದರಲ್ಲಿ ಬಣ್ಣಬಣ್ಣದ ದೀಪಾಲಂಕಾರ, ಸುಂದರವಾದ ಮಂಟಪಗಳಲ್ಲಿ ಮನೋಹರವಾದ ದುರ್ಗೆಯ ಮೂರ್ತಿಗಳು, ತಳಿರುತೋರಣ, ಸಂತಸದ ಕಳೆಯಿಂದ ನಗುನಗುತ್ತಾ ವ್ಯವಹರಿಸುವ ಜನಜಂಗುಳಿ, ಸರ್ವವಸ್ತುಗಳಿಂದ ತುಂಬಿದ ವ್ಯಾಪಾರಮಳಿಗೆಗಳು ನಮ್ಮ ಕಣ್ಮನ ತುಂಬುತ್ತವೆ.

Flag of India.svg

ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು

ಅಗರ್ತಲ | ಇಂಫಾಲ | ಇಟಾನಗರ | ಐಝ್ವಾಲ್ | ಕವರಟ್ಟಿ | ಕೋಹಿಮ | ಕೊಲ್ಕತ್ತ | ಗಾಂಧಿನಗರ | ಗ್ಯಾಂಗಟಕ್ | ಚೆನ್ನೈ | ಚಂಡೀಗಡ | ಜೈಪುರ | ತಿರುವನಂತಪುರಮ್ | ದಮನ್ | ದಿಸ್ಪುರ್ | ಡೆಹ್ರಾಡೂನ್ | ನವ ದೆಹಲಿ | ಪಟ್ನಾ | ಪಣಜಿ | ಪುದುಚೆರಿ | ಪೋರ್ಟ್ ಬ್ಲೇರ್ | ಬೆಂಗಳೂರು | ಭುವನೇಶ್ವರ | ಭೂಪಾಲ್ | ಮುಂಬೈ | ರಾಂಚಿ | ರಾಯ್ಪುರ್ | ಲಕ್ನೌ | ಶಿಮ್ಲಾ | ಶಿಲ್ಲಾಂಗ್ | ಶ್ರೀನಗರ | ಸಿಲ್ವಾಸ | ಹೈದರಾಬಾದ್

"https://kn.wikipedia.org/w/index.php?title=ಕೊಲ್ಕತ್ತ&oldid=576418" ಇಂದ ಪಡೆಯಲ್ಪಟ್ಟಿದೆ