ಒಳ್ಳೆಯದನ್ನು ಎದುರು ನೋಡು, ಕೆಟ್ಟದ್ದನ್ನು ಎದುರಿಸಲು ಸಿದ್ಧನಾಗು.

–ರಷ್ಯಾ ಗಾದೆ
Wednesday, 4 November, 2015

ತುಮಕೂರು

ಸ್ವಚ್ಛತೆ, ಬೆಲೆ ನಿಯಂತ್ರಣಕ್ಕೆ ಯಾರು ಹೊಣೆ?

ಇಕ್ಕಟ್ಟಾದ ರಸ್ತೆಯ ತೆರದ ಚರಂಡಿ ಪಕ್ಕದಲ್ಲೇ ಆ ಮೆಸ್ ಇದೆ. ಸ್ವಚ್ಛತೆ ಎಂದರೆ ‘ಅದು ಕೆ.ಜಿ.ಗೆ ಎಷ್ಟು?' ಎಂದು ಕೇಳುವ ಪೈಕಿ ಅದರ ಮಾಲೀಕರು. ಕನಿಷ್ಠ 4 ವರ್ಷದಿಂದ ನಡೆಯುತ್ತಿರುವ ಈ ಮೆಸ್‌ನ ಪರಿಶೀಲನೆಗೆ ಅಧಿಕಾರಿಗಳು ಬರಬಹುದೇನೋ, ಒಂದಿಷ್ಟು ಸುಧಾರಣೆ ಕಾಣಬಹುದೇನೋ ಅಂತ ಅಂದುಕೊಂಡಿದ್ದೇ ಬಂತು. ಆದರೆ ಅಂಥ ಯಾವ ಬದಲಾವಣೆಯೂ ಆಗಲಿಲ್ಲ.

ಹೆಸರು ಕೊಯ್ಲಿಗೆ ‘ಸೋನೆ’ ಕಾಟ

ಹುಳಿಯಾರು ಹೋಬಳಿ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಹೆಸರು ಬೆಳೆ ಕೊಯ್ಲಿಗೆ ಕಳೆದ ಒಂದು ವಾರದಿಂದ ಸುರಿಯುತ್ತಿರು ಸೋನೆ ಮಳೆ ಅಡ್ಡಿಯಾಗಿದೆ.

ಮಾನವೀಯತೆ ಸೃಷ್ಟಿಯೇ ಸಾಹಿತ್ಯದ ಅಪೇಕ್ಷೆ

ಸರಿ– ತಪ್ಪು ಶೋಧಿಸಿ, ಕಾಲಕಾಲಕ್ಕೆ ಮಾನವೀಯತೆಯ ಮನ್ವಂತರ ಸೃಷ್ಟಿಸುವುದೇ ಸಾಹಿತ್ಯದ ಬಹುದೊಡ್ಡ ಅಪೇಕ್ಷೆ ಎಂದು ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಅಭಿಪ್ರಾಯಪಟ್ಟರು.
 

ಓಡಿ, ದಣಿದು ಸುಸ್ತಾದ ವೈದ್ಯರು

ಜೋರಾಗಿ ಓಡು, ಗೋ..ಗೋ.. ಎಂದು ಕಿರುಚುತ್ತಾ ಸ್ಪರ್ಧಿಗಳನ್ನು ಹುರಿದುಂಬಿಸುತ್ತಿದ್ದ ಪೋಷಕರು ತಾವೂ ಅಂಕಣದೊಳಗೆ ಮಕ್ಕಳನ್ನು ಅನುಸರಿಸಿದರು.
 

ಪೌರಾಣಿಕ ಲೋಕದಲ್ಲಿ ಮಕ್ಕಳ ಕೃಷ್ಣಲೀಲೆ

ಕೃಷ್ಣ ಲೀಲೆ... ಶ್ರೀಕೃಷ್ಣ ಲೀಲೆ... ಬಾಲ ಕೃಷ್ಣ ಲೀಲೆ... ಬೆಣ್ಣೆಯ ಅಂದ... ಕೃಷ್ಣಗೆ ಚಂದ...
ಹೀಗೆ ಹಾಡು ಹಾಡುತ್ತ, ಕುಣಿಯುತ್ತ, ಭಿನ್ನ, ವಿಭಿನ್ನ ಪಾತ್ರಗಳ ಮೂಲಕ ರಂಗಪ್ರಿಯರನ್ನು ಆರು ತಾಸಿಗೂ ಹೆಚ್ಚು ಹೊತ್ತು ತಮ್ಮತ್ತ ಸೆಳೆದರು.

ಸುಳ್ಳು ಜಾತಿ ಪ್ರಮಾಣಪತ್ರ: ಆರೋಪ

ತಾಲ್ಲೂಕಿನ ಎಡೆಯೂರು ಹೋಬಳಿ ಮಾರ್ಕೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಸಿ ನೆಲೆ ಗ್ರಾಮದಲ್ಲಿ ಚುನಾವಣೆ ಮೀಸಲಾತಿ ಕಾರಣಕ್ಕೆ ತಾಲ್ಲೂಕು ಕಚೇರಿ ಅಧಿಕಾರಿಗಳು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಆರೋಪಿಸಿ, ಗ್ರಾಮಸ್ಥರು ಜಿಲ್ಲಾಧಿಕಾರಿ, ಚುನಾವಣೆ ಆಯೋಗದ ಮುಖ್ಯ ಆಯುಕ್ತರಿಗೆ ದೂರು ನೀಡಿದ್ದಾರೆ.

ಕಾಂಗ್ರೆಸ್‌ ಅಧಿಕಾರ ತ್ಯಜಿಸಲಿ

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರೈತರ ಆತ್ಮಹತ್ಯೆ, ಅತ್ಯಾಚಾರ, ಕೊಲೆ-ಸುಲಿಗೆ, ಅಕ್ರಮ ಮರಳು ಸಾಗಾಣಿಕೆ ಹೆಚ್ಚಿದ್ದು, ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಮಾಜಿ ಸಚಿವ ಬಿ.ಸತ್ಯನಾರಾಯಣ ಟೀಕಿಸಿದರು.

ದನ ಹುಲ್ಲು ಮೇದ್ಹಂಗೆ ಮೇದ್ಬುಟ್ರು

‘ಅಣ್ಣಾ... ಅಧ್ಯಕ್ಷರ್ರು ಎಲೆಕ್ಷನ್‌ ಯಾವ್‌ ಡೇಟ್‌ ಅಂತಾ ಗೊತ್ತಾತಾ? ದನ ಹುಲ್ಲು ಮೇದ್ಹಂಗೆ ಮೇಯ್ತಾವ್ರೆ. ಎಷ್ಟ್‌ ಕಾಸು ಹೊಂಚುದ್ರೂ ಸಾಕಾಗ್ತಿಲ್ಲ...’ – ಇದು ಗ್ರಾಮ ಪಂಚಾಯಿತಿ ಅಧ್ಯಕ್ಷರ ಮೀಸಲಾತಿ ಪ್ರಕಟಗೊಂಡ ನಂತರ ಸದಸ್ಯರನ್ನು ಪ್ರವಾಸಕ್ಕೆ ಕೊಂಡೊಯ್ದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೊಬ್ಬರು ಅಳಲು ತೋಡಿಕೊಂಡ ಪರಿ.

ರೈತ ಮುಖಂಡರ ಮೇಲೆ ಹಲ್ಲೆ: ಪ್ರತಿಭಟನೆ

ರೈತ ಮುಖಂಡರ ಮೇಲೆ ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿರುವ ಶಾಸಕ ಡಿ.ನಾಗರಾಜಯ್ಯ ಪುತ್ರ ಡಾ.ರವಿ ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕವು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿತು.

‘ಎಂ ಸ್ಯಾಂಡ್’ ಬಳಕೆ; ಆತಂಕ

ನಗರದ ಕೊಳೆಗೇರಿ ನಿವಾಸಿಗಳಿಗೆ ರಾಜೀವ್ ಆವಾಸ್ ಯೋಜನೆಯಡಿ ₨ 138 ಕೋಟಿ ವೆಚ್ಚದಲ್ಲಿ ಎರಡು ಹಂತದಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಇನ್ನೆರಡು ವರ್ಷದಲ್ಲಿ 2760 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.

ಫಲಿತಾಂಶ ಪಡೆಯಲು ಪರದಾಟ

ಐಟಿಐ ಫಲಿತಾಂಶದ ಅವ್ಯವಸ್ಥೆ ಖಂಡಿಸಿ ಗುರುವಾರ ವಿದ್ಯಾರ್ಥಿಗಳು ಮತ್ತು ಪೋಷಕರು ಸರ್ಕಾರಿ ಐಟಿಐ ಕಾಲೇಜು ಎದುರು ಪ್ರತಿಭಟಿಸಿದರು.

ರೈತರ ನಡಿಗೆ ಅಧಿಕಾರಿಗಳ ಬಳಿಗೆ!

‘ಇಲಾಖೆ ನಡಿಗೆ ರೈತರ ಬಾಗಿಲಿಗೆ’ ಯೋಜನೆಯ ಆಶಯ ವಿಫಲವಾಗಿದೆ. ತಾಲ್ಲೂಕಿನಲ್ಲಿ ‘ರೈತರ ನಡಿಗೆ ಇಲಾಖೆಗಳ ಕಚೇರಿಗೆ’ ಎಂಬುದು ಹೆಚ್ಚು ಸೂಕ್ತವಾದ ಹೇಳಿಕೆಯಾಗುತ್ತದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಜಿ.ಎಲ್. ಹನುಮಂತರಾಯಪ್ಪ ಅಸಮಾಧಾನ ವ್ಯಕ್ತಪಡಿಸಿದರು.

Pages