ಒಳ್ಳೆಯದನ್ನು ಎದುರು ನೋಡು, ಕೆಟ್ಟದ್ದನ್ನು ಎದುರಿಸಲು ಸಿದ್ಧನಾಗು.

–ರಷ್ಯಾ ಗಾದೆ
Wednesday, 4 November, 2015

ಬೆಂಗಳೂರು

ಐಟಿ ಅಬ್ಬರದಲ್ಲಿ ಕೇಳೀತೆ ಕೊಳೆಗೇರಿ ಕೂಗು?

ಬೆಂಗಳೂರು ನಗರದ ಅಭಿವೃದ್ಧಿಯಲ್ಲಿ ಬಿಬಿಎಂಪಿಯ ಜವಾಬ್ದಾರಿಯೇನು? ಸಂವಿಧಾನದ 74ರ ತಿದ್ದುಪಡಿ ಪ್ರಕಾರ (ನಗರ ಪಾಲಿಕೆ ಕಾಯಿದೆ) ಕಲಂ 243 (w), ಸ್ಥಳೀಯ ಸರ್ಕಾರಗಳು ನಗರ ಯೋಜನೆ, ರಸ್ತೆ ಮತ್ತು ಪಾದಚಾರಿ ಮಾರ್ಗಗಳು, ನೀರು ಸರಬರಾಜು, ಬಡತನ ನಿರ್ಮೂಲನೆ, ಸಾರ್ವಜನಿಕ ಆರೋಗ್ಯ, ಸಾರ್ವಜನಿಕ ಶಿಕ್ಷಣ, ಕಸ ವಿಲೇವಾರಿ, ಪರಿಸರ, ಕೊಳಚೆ ಪ್ರದೇಶಗಳ ಸುಧಾರಣೆ, ಉದ್ಯಾನ ಹಾಗೂ ಆಟದ ಮೈದಾನಗಳು, ಭೂ ಉಪಯೋಗ ನಿಯಂತ್ರಣ ಇತ್ಯಾದಿ.

ಬಿಎಂಟಿಸಿ: ಜುಲೈ 3ರಿಂದ ಪದವಿ ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ವಿತರಣೆ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಜುಲೈ 3ರಿಂದ ಪದವಿ ವಿದ್ಯಾರ್ಥಿಗಳಿಗೆ ರಿಯಾಯಿತಿ  ದರದ ವಿದ್ಯಾರ್ಥಿ ಪಾಸುಗಳನ್ನು ವಿತರಿಸಲಿದೆ.
ಈ ಪಾಸುಗಳನ್ನು ಬೆಳಿಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ಎಲ್ಲ ಕೆಲಸದ ದಿನಗಳಲ್ಲಿ (ಭಾನುವಾರ, &ರಜಾ ದಿನಗಳನ್ನು ಹೊರತುಪಡಿಸಿ) ನಗರದಾದ್ಯಂತ ವಿಸ್ತರಿಸಿರುವ 40 ಪಾಸ್ ವಿತರಣಾ ಕೇಂದ್ರಗಳಲ್ಲಿ ವಿತರಿಸಲಾಗುವುದು.

ಜೆಡಿಎಸ್‌ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧ

ಬಿಬಿಎಂಪಿ ಚುನಾವಣೆಗೆ ಆಯೋಗ ವೇಳಾಪಟ್ಟಿ ಘೋಷಿಸಿದ ನಂತರ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ  ಚುರುಕಾಗಿದೆ. ಎಲ್ಲ ಪಕ್ಷಗಳು ಚುನಾವಣೆಗೆ  ಒಳಗೊಳಗೆ ಸಿದ್ಧತೆ ನಡೆಸುತ್ತಿವೆ.

ಕ್ರೈಸ್ತರ ಒತ್ತಾಯ

‘ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಕ್ರೈಸ್ತ ಸಮುದಾಯದ ಅಭ್ಯರ್ಥಿಗಳಿಗೆ ರಾಜಕೀಯ ಪಕ್ಷಗಳು ಆದ್ಯತೆ ನೀಡಬೇಕು. ಈ ಬಾರಿ ಕ್ರೈಸ್ತರಿಗೆ ಹೆಚ್ಚಿನ ಸ್ಥಾನಗಳನ್ನು ನೀಡಬೇಕು’ ಎಂದು  ಕರ್ನಾಟಕ ಕ್ರೈಸ್ತ ಅಲ್ಪಸಂಖ್ಯಾತರ ಜಾಗೃತಿ ವೇದಿಕೆ ಅಧ್ಯಕ್ಷ ಶಾಂತಪ್ಪ ಅಗಲಾಪುರ ಒತ್ತಾಯಿಸಿದರು.

ಎಎಪಿ ಕಾರ್ಯಕರ್ತರಿಗೆ ತರಬೇತಿ ಶಿಬಿರ

‘ಆಮ್‌ ಆದ್ಮಿ’ ಪಕ್ಷ (ಎಎಪಿ) ಕೂಡ ಬಿಬಿಎಂಪಿ ಚುನಾವಣಾ ಸಿದ್ಧತೆಯಲ್ಲಿ ಹಿಂದೆ ಬಿದ್ದಿಲ್ಲ. ಪಕ್ಷದ ಕಾರ್ಯಕರ್ತರನ್ನು ಚುನಾವಣಾ ಪ್ರಚಾರಕ್ಕೆ ಸಿದ್ಧ ಮಾಡಲು  ನಿತ್ಯ ವಿಶೇಷ ತರಬೇತಿ ಶಿಬಿರಗಳನ್ನು ನಡೆಸುತ್ತಿದೆ.

ಒಣತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ಟಿಪ್ಪರ್‌

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಿಂದ 35 ವಾರ್ಡ್‌ಗಳ ತ್ಯಾಜ್ಯ ವಿಲೇವಾರಿಗಾಗಿ ಕರೆದಿರುವ ಟೆಂಡರ್‌ನಲ್ಲಿ ಒಣತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ಟಿಪ್ಪರ್‌ಗಳ ವ್ಯವಸ್ಥೆ ಮಾಡುವುದೂ ಸೇರಿದಂತೆ ಹಲವು ಹೊಸ ಷರತ್ತುಗಳನ್ನು ವಿಧಿಸಲಾಗಿದೆ.

ದೋಷಪೂರಿತ 35 ಸಾವಿರ ಪ್ರಕರಣ ಪತ್ತೆ

‘ಮತದಾರರ ಪಟ್ಟಿಯಲ್ಲಿ ಹೆಸರುಗಳ ಪುನರಾರ್ವತನೆ, ಒಂದೇ ಭಾವಚಿತ್ರ ವಿವಿಧ ಹೆಸರುಗಳಿಗೆ ಬಳಕೆ ಸೇರಿದಂತೆ ಹಲವು ಪ್ರಮಾದಗಳು ನಡೆದಿದ್ದು, ಇದುವರೆಗೆ 35 ಸಾವಿರ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ’ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಆಯುಕ್ತ ಜಿ.ಕುಮಾರ್‌ ನಾಯಕ್‌ ತಿಳಿಸಿದರು.

‘ಭ್ರಷ್ಟಾಚಾರಕ್ಕೆ ಗೂಂಡಾಗಿರಿಯ ರಕ್ಷಣೆ’

‘ಭ್ರಷ್ಟಾಚಾರಕ್ಕೆ ಈಗ ಗೂಂಡಾಗಿರಿಯ ರಕ್ಷಣೆ ಇದೆ. ಹೀಗಾಗಿ ಜನರು ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಹೆದರುತ್ತಿದ್ದಾರೆ’ ಎಂದು ಸಿಪಿಐ ಮುಖಂಡ ಸಿದ್ದನಗೌಡ ಪಾಟೀಲ್‌ ಹೇಳಿದರು.

ಬಯೋಕಾನ್‌ ಕಾರ್ಖಾನೆಗೆ ಇಂದು ಮಾಲಿನ್ಯ ನಿಯಂತ್ರಣ ಮಂಡಳಿ ತಂಡ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳನ್ನು ಒಳಗೊಂಡ ಏಳು ಜನರ ತಂಡವು ಮಂಗಳವಾರ (ಜೂ. 30) ಆನೇಕಲ್‌ ತಾಲ್ಲೂಕಿನ ಹೆಬ್ಬಗೋಡಿಯಲ್ಲಿರುವ ಬಯೋಕಾನ್‌ ಕಾರ್ಖಾನೆಗೆ ಭೇಟಿ ನೀಡಲಿದೆ.

ಕಾರಾಗೃಹ ಇಲಾಖೆಯ ವಾರ್ಡರ್‌ ಹುದ್ದೆಗೆ ಅರ್ಜಿ

ಕರ್ನಾಟಕ ಕಾರಾಗೃಹಗಳ ಇಲಾಖೆಯಲ್ಲಿ ಖಾಲಿ ಇರುವ 320 ವಾರ್ಡರ್‌ (ವೀಕ್ಷಕರು) ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಲಾಗಿದೆ.

ರಸ್ತೆಗಳಲ್ಲಿ ಕಮಾನು ನಿರ್ಮಾಣ ಬೇಡ

ಇನ್ನು ಮುಂದೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಯಾವುದೇ ಸಾರ್ವಜನಿಕ ರಸ್ತೆಗಳಲ್ಲಿ ಕಮಾನು ನಿರ್ಮಾಣ ಮಾಡಬಾರದು ಎಂದು ಹೈಕೋರ್ಟ್‌ ಆದೇಶಿಸಿದೆ.

ಕೃಷ್ಣರಾವ್, ಅಶ್ವಿನ್‌ ಬಂಧಿಸುವಂತೆ ಆಗ್ರಹ

ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರರಾವ್‌‌ ಅವರ ನಿವಾಸವನ್ನು ದುರುಪಯೋಗ ಮಾಡಿಕೊಂಡವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ, ಸೋಮವಾರ ಹೈಗ್ರೌಂಡ್ಸ್‌ ಠಾಣೆಯಲ್ಲಿ ಆಮ್‌ ಆದ್ಮಿ ಪಕ್ಷದ ಸದಸ್ಯರು ದೂರುನೀಡಿದ್ದಾರೆ.

Pages