Saturday, 9 April, 2016

ಮುಕ್ತಛಂದ

ಬದಲಾಗುವ ಜಗತ್ತು ಮತ್ತು ಹೊಸತು!

ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗುವ ಪ್ರಚಲಿತ ವಿದ್ಯಮಾನಗಳಾಚೆಗೆ ಜಗತ್ತಿನಲ್ಲಿ ಅನೇಕ ಬದಲಾವಣೆಗಳು ಸದ್ದಿಲ್ಲದೆ ಆಗುತ್ತಿರುತ್ತವೆ. ಹರಿಯುವ ನೀರಿನ ಬಗೆಯ ಈ ಚಲನಶೀಲತೆಯ ಹಿಂದೆ ನಿರಂತರ ಬದಲಾವಣೆಯ ತುಡಿತ ಇರುವಂತಿದೆ. ಈ ರೂಪಾಂತರದ ಪ್ರಕ್ರಿಯೆಗೆ ಪ್ರೇಮದ ಸ್ಪರ್ಶವಾದರೆ ಅದು ಮನುಷ್ಯಸ್ನೇಹಿ ಬದಲಾವಣೆ ಎನ್ನಿಸಿಕೊಳ್ಳುತ್ತದೆ. 

ಸಿಂಧೂ ಲಿಪಿ ಸಂಖ್ಯಾ ರೂಪಿ!

ಒಡೆಯಲಾಗದ ಒಗಟಿನಂತೆ ಇರುವ ಸಿಂಧೂ ಲಿಪಿಯ ಬಗ್ಗೆ ವಿಜ್ಞಾನ ಇತಿಹಾಸಕಾರ ಸುಬ್ಬರಾಯಪ್ಪ ಅವರು ನಡೆಸಿರುವ ಸಂಶೋಧನೆಯ ಫಲಿತ ಕುತೂಹಲಕರವಾಗಿದೆ. ಚಿತ್ರ ಹಾಗೂ ಸಂಖ್ಯೆಗಳ ಮೂಲಕ ಸಿಂಧೂ ಲಿಪಿ ಅಭಿವ್ಯಕ್ತಿ ಕಂಡುಕೊಂಡಿತ್ತು ಎನ್ನುವುದು ಅವರ ನಿಲುವು.

ಅನ್ನ

ಐದೋ ಆರೋ ಕ್ಲಾಸ್ ಇರಬೇಕು ಆಗ. ಶಾಲೆಯಲ್ಲಿ ಮಧ್ಯಾಹ್ನ ಊಟಕ್ಕೆ ಬೆಲ್ ಹೊಡೆದಾಗ ಅಕ್ಕ ತಮ್ಮ ಇಬ್ಬರೂ ಮನೆಗೆ ಓಡಿಬಂದರು. ಅವ್ವ ಯಾರದೋ ಹೊಲಕ್ಕೆ ಕೂಲಿಗೆ ಹೋಗಿದ್ದಳು. ಅಲ್ಲೇ ಚಪ್ಪರದ ಸಂದಿಯಲ್ಲಿ ಸಿಕ್ಕಿಸಿದ್ದ ಬೀಗದ ಕೈ ಹುಡುಕಿ ಬೀಗ ತೆಗೆದು ಒಳಗೆ ಹೋದವರೇ ಮನೆಯೆಲ್ಲಾ ಹುಡುಕಿದರು. ಅಟ್ಟದ ಮೇಲೆ ಸೀರೆಯಲ್ಲಿ ಸುತ್ತಿಟ್ಟಿದ್ದ ತಪ್ಪಲೆ ಕಣ್ಣಿಗೆ ಬಿದ್ದ ಕೂಡಲೇ ‘ಅಕ್ಕಾ’ ಎಂದು ಕಿರುಚಿದ ಸಿದ್ಧನ ಬಾಯಿಮೇಲೆ ಒಂದು ಬಿಟ್ಟಳು ಚೆನ್ನಿ.

ಕವಿ ಮತ್ತು ಕಲಾವಿದ: ಪದ ಮತ್ತು ಕುಂಚ

ಅವನು ನನ್ನ ಕಾಲಬೆರಳುಗಳಿಂದ ಪ್ರಾರಂಭಿಸುತ್ತಾನೆ.
ಬಲಗೈಯಲ್ಲಿ ಕುಂಚವನ್ನು ಗಾಢ ಬಣ್ಣದಲ್ಲಿ ಅದ್ದಿ ಅತಿ ಕುಶಲತೆಯಿಂದ
ಹಿಮ್ಮಡಿಯನ್ನು ಎಡಗೈಯಲ್ಲಿ ಎತ್ತಿಹಿಡಿದು ನಾಜೂಕಾಗಿ ಬಳಿಯತೊಡಗುತ್ತಾನೆ.

ಟರ್ಕಿಯ ಸಾಂಸ್ಕೃತಿಕ ಮೇರು ‘ಎಫೆಸಸ್‌ ’

ಸಂಸ್ಕೃತಿ ಪ್ರಿಯರಷ್ಟೇ ಅಲ್ಲದೆ, ವರ್ಜಿನ್ ಮೇರಿ ಚರ್ಚ್ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸಲೆಂದು ಎಫೆಸಸ್‌ಗೆ ದೊಡ್ಡ ಸಂಖ್ಯೆಯ ಪ್ರವಾಸಿಗರು ಬರುತ್ತಾರೆ. ಕ್ರಿಸ್ತನ ತಾಯಿ ವರ್ಜಿನ್ ಮೇರಿ ಸಾಯುವ ಸಮಯದಲ್ಲಿ ಎಫೆಸಸ್‌ನ ಹಸಿರು ಬೆಟ್ಟಗಳಲ್ಲಿ ತಂಗಿದ್ದಾಗಿ ಅಲ್ಲಿನ ಜನ ನಂಬುತ್ತಾರೆ.

ಫೋಟೊ ಗೀಳು!

ಈಗ ಸ್ಮಾರ್ಟ್ ಫೋನ್ ಯುಗ. ಎಲ್ಲ ಸಮಯದಲ್ಲೂ ಎಲ್ಲರೂ ಕ್ಯಾಮೆರಾಕ್ಕೆ ರೆಡಿ ಎನ್ನುವ ದಿನಗಳಿವು. ಈ ಫೋಟೊ ಗೀಳು ನಮ್ಮ ಸಂವೇದನೆಗಳನ್ನು ಜಡಗೊಳಿಸುತ್ತಿದೆಯಾ?

ತಲ್ಲಣಗಳ ಕುಲುಮೆಯ ರಂಗಮಂಚ

‘ಎಫ್-ಒನ್/ ಒನ್ ಝೀರೊ ಫೈವ್’ ಮರಾಠಿ ನಾಟಕ ವರ್ತಮಾನದ ತವಕ ತಲ್ಲಣಗಳ ಅಸಾಧಾರಣ ಅಭಿವ್ಯಕ್ತಿಯಂತೆ ಗಮನಸೆಳೆಯುತ್ತದೆ. ಇಂಥ ಪ್ರಯೋಗಗಳು ಕನ್ನಡದಲ್ಲಿ ಏಕಿಲ್ಲ ಎನ್ನುವ ಪ್ರಶ್ನೆಯನ್ನೂ ಈ ನಾಟಕ ಉಂಟುಮಾಡುತ್ತದೆ.

ಪರಿಸರ ಪ್ರೀತಿಯ ದಾರಿ

ಪ್ರಕಾಶ್‌ ಮೇಷ್ಟ್ರು ಪರಿಸರ ಪ್ರೇಮಿ. ಪಚ್ಚೆ–ಪೈರು ಅಂದ್ರೆ ಬಹಳ ಪ್ರೀತಿ. ಪಾಠದ ಜೊತೆ ಪರಿಸರ ಪ್ರಜ್ಞೆಯನ್ನೂ ಪೇರಿಸೋದು ಅವರ ಪರಿಪಾಠ. ಪಾಟಿ, ಚೀಲ, ಪೆನ್ನು ಪಕ್ಕಕ್ಕಿಡಿಸಿ ಆಗಾಗ್ಗೆ ಗಿಡ ಮರ, ಹಣ್ಣು ಹಂಪಲು, ಕ್ರಿಮಿ ಕೀಟ, ಹಕ್ಕಿಪಕ್ಕಿಗಳನ್ನು ವಿವರಿಸೋದು ಅಂದ್ರೆ ಬಹಳ ಇಷ್ಟ.

ಕಪ್ಪೆಯಮ್ಮನ ಸಂಸಾರ

ವಟವಟಗುಟ್ಟೋ ಕಪ್ಪೆ ರಾಯಗೆ
ಟ್ರೊಂಯ್ ಟ್ರೊಂಯ್ ಅನ್ನೋ ಹೆಂಡತಿ
ಮೂರು ಮಕ್ಕಳು ಕಪ್ಪೆಯಮ್ಮನಿಗೆ
ಈಗ ಅವಳು ಬಾಣಂತಿ

ಕಾಡು ಹರಟೆಹಕ್ಕಿ

ಜಂಗಲ್ ಬಾಬ್ಲರ್ ಅಥವಾ ಕಾಡು ಹರಟೆಹಕ್ಕಿ ಮೈನಾದಷ್ಟೇ ಗಾತ್ರದ್ದು. ಅಂದರೆ ದೊಡ್ಡದಾಗಿಯೇ ಇರುತ್ತವೆ. ಅವುಗಳಿಗೆ ಭಯ ಹುಟ್ಟಿಸುವಂಥ ಹಳದಿ ಕಣ್ಣುಗಳಿವೆ. ಬೂದು-ಕಂದು ಮಿಶ್ರಿತ ಬಣ್ಣದ ಈ ಹಕ್ಕಿಯ ಎದೆಭಾಗ ಆಕರ್ಷಕವಾಗಿದೆ. ಇದು ಸಂಘಜೀವಿ.

ಗಡಿಯ ಸೂರ್ಯಾಸ್ತ

ಪಂಜಾಬ್‌ನ ಅಮೃತಸರದ ಪಶ್ಚಿಮ ಭಾಗದಲ್ಲಿ ಇರುವ ವಾಘಾ ಗಡಿ ಉಭಯ ದೇಶಗಳಿಗೆ ದಾಟಲು ಇರುವ ಏಕೈಕ ಸ್ಥಳ. ಪಾಕಿಸ್ತಾನದ ಲಾಹೋರ್‌ನ ಪೂರ್ವ ಭಾಗದಲ್ಲಿ ಅದು ಇದೆ. ಪ್ರತಿದಿನ ಸೂರ್ಯಾಸ್ತದ ಹೊತ್ತಿಗೆ ಅಚ್ಚರಿಯ ಆಚರಣೆ ಅಲ್ಲಿ ನಡೆಯುವುದು ಇನ್ನೊಂದು ವಿಶೇಷ.

ಅಪರೂಪದ ಹವ್ಯಾಸ

1947ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದ ಗ್ರೇಸ್ ಮುರ್ರೆ ಹಾಪರ್ ತಾನು ಕೆಲಸ ಮಾಡುತ್ತಿದ್ದ ಕಂಪ್ಯೂಟರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದನ್ನು ನೋಡಿ ಕಂಗಾಲಾದರು. ಆಮೇಲೆ ನೋಡಿದಾಗ, ಕಂಪ್ಯೂಟರ್ ಒಳಗೆ ಕೀಟವೊಂದು ಇದ್ದದ್ದು ಗೊತ್ತಾಯಿತು.

Pages