ಮೇಕಪ್‌ ನಾಣಿ

Posted By:
Subscribe to Oneindia Kannada



Make Up Nani

  • ಸುಮತೀಂದ್ರ ನಾಡಿಗ
ನಮ್ಮ ಮುಖ ನಮ್ಮದಲ್ಲದ ಹಾಗೆ, ಯಾವುದೊ ಪಾತ್ರದ ಹಾಗೆ
ಅದ್ಭುತವಾಗಿ ಮೇಕಪ್‌ ಮಾಡುತ್ತಿದ್ದ ನಗುವ ಮೀಸೆಯ ನಾಣಿ
ಕಣ್ಣು ಯಾರಾದರೂ, ವೈದ್ಯ ವಿದ್ಯಾರ್ಥಿಗಳು ದೇಹ ಬಳಸಲಿ ಎಂದು
ನೀನು ಏರಿಯೆ ಬಿಟ್ಟೆ ಸಾವಿನೇಣಿ.

ನಾಟಕಕ್ಕೇ ಅಲ್ಲ , ಬದುಕಿಗೂ ಮೇಕಪ್ಪು ಬೇಕಾಗಿದೆ
ಹುಟ್ಟಿದಾಕ್ಷಣವೇ ಮೇಕಪ್‌ ಮಾಡುತ್ತಾಳೆ ಸೂಲಗಿತ್ತಿ
ಆಮೇಲೆ ತಾಯಿ. ಆಮೇಲೆ ಹಾಸಿಗೆಯ ಮುಖಬಿಟ್ಟು
ಸಂಬಂಧ ಮುಖವಾಡ ನಾವೆ ಧರಿಸುತ್ತೇವೆ.

ಅಲಂಕಾರ ಕಾವ್ಯಕ್ಕೆ ಮಾತ್ರವೆ ಅಲ್ಲ, ದೇಹಕ್ಕೂ ಬೇಕು
ಸಿಂಗಾರಗೊಳಿಸುವುದು ಮೂಲ ಅವಶ್ಯಕತೆ, ಅಲ್ಲವೇ ನಾಣಿ?
ಅದರಲ್ಲಿ ಪರಿಣತಿಯ ಗಳಿಸಿದವ ನೀನು ; ಮೀಸೆ ಅಂಟಿಸಹೋಗಿ
ಅರ್ಧಾಂಗಿ ಪಡೆದವನು, ಅದರ ನೆನಪಿಗೆ ಮೀಸೆ ಬಿಟ್ಟಿದೆಯೇನು ?

ಏ ನಾಣಿ, ನಾವಿಬ್ಬರೂ ತಲೆ ಮೀಸೆ ಹುಬ್ಬುಗಳ ಬಿಳಿ ಕೂದಲವರು ;
ಬುಧವಾರ ಸಿಕ್ಕವನು, ಗುರುವಾರ ಏಕಯ್ಯ ಹೊರಟುಬಿಟ್ಟೆ ?
ಒಮ್ಮೆಗೇ ಹತ್ತು ಕಡೆ ಇರಬೇಕೆಂದು ಅನಿಸಿತ್ತೆ ? ದೇಹ ಪಂಜರ ಬಿಟ್ಟು
ಎಲ್ಲ ಕಡೆಯೂ ನೀನು ಕಾಣಿಸುತ್ತಿರಲೆಂದು ನಿನ್ನ ಕನಸಿತ್ತೆ ?

ದಿನವೂ ಎದ್ದು ಮೇಕಪ್ಪು ಮಾಡಿಕೊಳ್ಳುವ ಹೊತ್ತು ನೆನಪಾಗುತ್ತೀಯ ಗೆಳೆಯ,
ಈ ಗತ ಬರೀ ನೆನಪಾಗಿ ಮಾತ್ರ ಉಳಿದಿದ್ದೀಯ.


ಇದನ್ನೂ ಓದಿ-
ಅಳಿಸಿದ ಮೇಕಪ್ಪು

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ